ಶಿವಣ್ಣನ ಬರ್ತ್ ಡೇಗೆ ಭಜರಂಗಿ-2 ಟೀಸರ್ ರಿಲೀಸ್ ಬೆಂಗಳೂರು, ಜುಲೈ 02, 2020 (..):ಭಜರಂಗಿ-2 ಸಿನಿಮಾದ ಅಫೀಶಿಯಲ್​ ಟೀಸರ್​ ಶಿವರಾಜ್​ಕುಮಾರ್​ ಹುಟ್ಟುಹಬ್ಬದ ದಿನದಂದು ಟೀಸರ್​ ಬಿಡುಗಡೆಯಾಗಲಿದೆ. ಭಜರಂಗಿ ಟೀಂ ಶಿವಣ್ಣನ ಹುಟ್ಟುಹಬ್ಬದಂದು ಬಿಗ್​​​ ಪ್ಲಾನ್​ ಮಾಡಿಕೊಂಡಿದೆ ಜೂಲೈ 12 , 11:30ಕ್ಕೆ ಟೀಸರ್ ರಿಲೀಸ್​ ಮಾಡಲು ಮುಂದಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಜರಂಗಿ -2 ಚಿತ್ರತಂಡ 2ನೇ ಫೊಸ್ಟರ್​​ ರಿಲೀಸ್​ ಮಾಡಿತ್ತು. ಇದೀಗ ಶಿವರಾಜ್​ಕುಮಾರ್​ ಹುಟ್ಟುಹಬ್ಬದ ಪ್ರಯುಕ್ತ ಟೀಸರ್​ ರಿಲೀಸ್​ ಮಾಡಲು ಸಿದ್ಧತೆ ಮಾಡಿಕೊಂಡಿದೆ. ನಟ ಶಿವರಾಜ್​ಕುಮಾರ್​ ಕೂಡ ತಮ್ಮ ಫೇಸ್​ಬುಕ್​ನಲ್ಲಿ ಭಜರಂಗಿ ಚಿತ್ರದ ಅಫೀಶಿಯಲ್​ ಟೀಸರ್​ ರಿಲೀಸ್​​ ಆಗುವ ಕುರಿತು ಪೋಸ್ಟರ್​ ಪೋಸ್ಟ್ ಮಾಡಿದ್ದಾರೆ.