ಹೆಡ್ ಕಾನ್ಸ್ ಟೇಬಲ್ ಗೆ ಕೊರೋನಾ ಸೋಂಕು: ಮೈಸೂರು ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಛೇರಿ ಸೀಲ್ ಡೌನ್… ಮೈಸೂರು,ಜು,2,2020(..): ರಾಜ್ಯದಲ್ಲಿ ಪೊಲೀಸರ ಮೇಲೆ ಕೊರೋನಾ ಸವಾರಿ ಮಾಡುತ್ತಿದ್ದು ಈ ನಡುವೆ ಮೈಸೂರು ನಗರದ ಸಂಚಾರಿ ಹೆಡ್ ಕಾನ್ಸ್ ಟೇಬಲ್ ಒಬ್ಬರಿಗೆ ಕೊರೋನಾ ಸೋಂಕಿರುವುದು ದೃಢವಾಗಿದೆ. ನಗರದ ದೇವರಾಜ ಸಂಚಾರಿ ಪೊಲೀಸ್ ಠಾಣೆ ಪೇದೆಯೊಬ್ಬರಿಗೆ ಕೊರೋನಾ ಸೊಂಕು ದೃಢವಾಗಿದೆ. ಸೊಂಕು ಧೃಡ ಹಿನ್ನೆಲೆ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಛೇರಿಯನ್ನ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ಸಂಚಾರಿ ಹೆಡ್ ಕಾನ್ಸ್ ಟೇಬಲ್ ಸಂಚಾರಿ ಪೊಲೀಸರ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಮೈಸೂರು ಸಂಚಾರಿ ವಿಭಾಗದ ಎಸಿಪಿ ಸೇರಿದಂತೆ ಸಂಪರ್ಕದಲ್ಲಿದ್ದ ಹಲವರು ಕ್ವಾರೈಂಟೈನ್ ಮಾಡಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೊಲೀಸರಿಗೂ ಮಹಾಮಾರಿ ಕೊರೋನಾ ವಕ್ಕರಿಸುತ್ತಿದ್ದು : - -- –- –-