ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು 50ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಸಾಧ್ಯತೆ… ಮೈಸೂರು,ಜು,1,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಕೊರೋನಾ ಸ್ಪೋಟಗೊಳ್ಳಲಿದೆ. ಹೌದು, ಇಂದು ಮೈಸೂರಿನಲ್ಲಿ 50ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ. ಈ ಕುರಿತು ಮೈಸೂರು ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ದಿನವೊಂದರ ಪ್ರಕರಣದಲ್ಲಿ ಇಂದು ಅತಿ ಹೆಚ್ಚು ಸಂಖ್ಯೆ ದಾಖಲಾಗುವ ಸಾಧ್ಯತೆ ಇದೆ. 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಬರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸದ್ಯ ಮೈಸೂರಿನಲ್ಲಿ 270 ಒಟ್ಟು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆಕ್ಟಿವ್ ಕೇಸ್‌ಗಳು 89 ಇದೆ. ನಿನ್ನೆ ಮೈಸೂರಿನಲ್ಲಿ 9 ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಅತಿ ಹೆಚ್ಚು ನಂಬರ್‌ಗಳು ಬರುವುದಾಗಿ ಜಿಲ್ಲಾಧಿಕಾರಿಯೂ ಹೇಳಿದ್ದಾರೆ. : - - 52 -