ಮಹಿಳೆಗೆ ಕೊರೋನಾ ಪಾಸಿಟಿವ್: ಮೈಸೂರಿನಲ್ಲಿ ರಸ್ತೆ ಸೀಲ್ ಡೌನ್… ಮೈಸೂರು,ಜೂ,30,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಓರ್ವ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ನಾರಾಯಣ ಶಾಸ್ತ್ರಿ ರಸ್ತೆ ಬಳಿ ಇರುವ ಕುಂಬಾರಗೇರಿಯಲ್ಲಿ 40 ವರ್ಷ ವಯಸ್ಸಿನ ಮಹಿಳೆಗೆ ಕೊರೋನಾ ಸೋಂಕು ಧೃಢವಾಗಿದ್ದು ಈ ಹಿನ್ನೆಲೆ ಕುಂಬಾರಗೇರಿ ಮೊದಲ ಮುಖ್ಯರಸ್ತೆಯ 1ನೇ ಕ್ರಾಸ್ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ಮಹಿಳೆಯ ಕುಟುಂಬದ ಸದಸ್ಯರನ್ನ ಕ್ವಾರೆಂಟೈನ್ ಮಾಡಲಾಗಿದೆ. 25 ಮನೆಗಳಿರುವ ರಸ್ತೆಯನ್ನ ಸೀಲ್ ಡೌನ್ ಮಾಡಲಾಗಿದ್ದು ರಸ್ತೆಯ ಎರಡೂ ಬದಿಗೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. : – - – .