ಸೂಪರ್‌ ಬೈಕ್‌ ಮೇಲೆ ಮುಖ್ಯನ್ಯಾಯಮೂರ್ತಿ: ಟ್ರೆಂಡಿಂಗ್ ಆದ ಅಪರೂಪದ ಫೋಟೋ ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರ ಅಪರೂಪದ ಫೋಟೋ ಒಂದು ಸೋಷಿಯಲ್ ಮಿಡಿಯಾಗಳಲ್ಲಿ ಭಾನುವಾರ ಟಾಪ್ ಟ್ರೆಂಡಿಂಗ್ ನಲ್ಲಿತ್ತು. ಸಿಜೆ ಅವರು ಹಾರ್ಲೆ ಡೇವಿಡ್ಸನ್ ಸಿವಿಒ 2020 ಸೂಪರ್‌ ಬೈಕ್‌ ಮೇಲೆ ಕುಳಿತು ಅದನ್ನು ಓಡಿಸಲು ಯತ್ನಿಸುತ್ತಿರುವ ಚಿತ್ರವೇ ಭಾನುವಾರ ಸೋಷಿಯಲ್ ಮೀಡಿಯಾದ ಟಾಪ್ ಟ್ರೆಂಡಿಂಗ್ ಫೋಟೋ. 64 ವರ್ಷದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರಿಗೆ ಈ ಮೊದಲಿನಿಂದಲೂ ಬೈಕ್‌ಗಳ ಬಗ್ಗೆ ಒಲವು. ಈ ಹಿಂದೆಯೂ ಸಹ ಬುಲೆಟ್ ಹೊಂದುವ ಬಗ್ಗೆ ಮಾತನಾಡಿದ್ದರು. ಮುಖ್ಯ ನ್ಯಾಯಮೂರ್ತಿ ಬೊಬ್ಡೆ, ಪ್ರಸ್ತುತ ತವರೂರು ನಾಗ್ಪುರದಲ್ಲಿದ್ದು, ಭಾನುವಾರ ಟ್ರೆಂಡ್ ಆದ ಫೋಟೋ ಅಲ್ಲೇ ತೆಗೆದದ್ದು. : - - - : : , , . , 64, . , 2020. ’ , .