ಮೈಸೂರಿನಲ್ಲಿ ನಾಲ್ಕು ದಿನಗಳಿಂದ ಬಂದ್ ಆಗಿದ್ದ ಮಾರುಕಟ್ಟೆಗಳು ಇಂದು ರೀ ಓಪನ್…. ಮೈಸೂರು,ಜೂ,29,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿದ್ದ ಮೈಸೂರು ಮಾರುಕಟ್ಟೆಗಳು ಇಂದು ರೀ ಓಪನ್ ಆಗಿವೆ. ಕೊರೋನಾ ಭೀತಿಯಿಂದಾಗಿ ಮೈಸೂರಿನ ದೇವರಾಜ ಮಾರುಕಟ್ಟೆ, ಸಂತೇಪೇಟೆ, ಶಿವರಾಂಪೇಟೆ, ಮನ್ನಾರ್ಸ್ ಮಾರ್ಕೆಟ್ ಸೇರಿದಂತೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇದೀಗ ಇಂದಿನಿಂದ ಮಾರುಕಟ್ಟೆಗಳು ಮತ್ತೆ ವ್ಯಾಪಾರ ವಹಿವಾಟು ಪ್ರಾರಂಭಿಸಿವೆ. ದೇವರಾಜ ಮೊಹಲ್ಲಾದ ಕೊತ್ವಾಲ್ ರಾಮಯ್ಯ ರಸ್ತೆಯಲ್ಲಿ ಕೊರೊನಾ ಸೋಂಕು ಕಂಡುಬಂದಿತ್ತು. ಸೋಂಕಿತರು ಶಿವರಾಂಪೇಟೆ ಭಾಗದಲ್ಲಿ ಓಡಾಡಿದ್ದರಿಂದ ಬಂದ್ ಮಾಡಲಾಗಿತ್ತು.. ಮೈಸೂರು ಮಹಾನಗರ ಪಾಲಿಕೆ ಮಾರುಕಟ್ಟೆ ಭಾಗಗಳಲ್ಲಿ ಔಷದಿ ಸಿಂಪಡಣೆ ಮಾಡಿತ್ತು. : – – – .