ದೇಶದಲ್ಲಿ ಒಂದೇ ದಿನ 16,922 ಮಂದಿಗೆ ಕೊರೋನಾ ಸೋಂಕು ಪತ್ತೆ… ನವದೆಹಲಿ,ಜೂ,25,2020(..): ದೇಶದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆಸಿದ್ದು ಒಂದೇ ದಿನ 16,922 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಹರಡುತ್ತಿರುವ ಕೊರೋನಾ ಮಹಾಮಾರಿ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ನೀಡಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 418 ಜನ ಕೊರೊನಾ ಗೆ ಬಲಿಯಾದರೇ 16,922 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಒಟ್ಟು 4,73,105 ಸಕಾರಾತ್ಮಕ ಪ್ರಕರಣಗಳಾದರೇ ಇದರಲ್ಲಿ 1,86,514 ಸಕ್ರಿಯ ಪ್ರಕರಣಗಳು ದಾಖಲಾಗಿದ್ದಾರೆ. 4,73,105 ಸೋಂಕಿತರ ಪೈಕಿ 2,71,697 ಗುಣಮುಖರಾಗಿದ್ದಾರೆ. ಇದುವರೆಗೆ ದೇಶದಲ್ಲಿ ಕೊರೋನಾಗೆ 14,894 ಮಂದಿ ಸಾವನ್ನಪ್ಪಿದ್ದಾರೆ. : - - 16,922 –