ನಾಳೆಯಿಂದ ಎಸಿ ಬಸ್ ಗಳ ಸಂಚಾರಕ್ಕೆ ಕೆಎಸ್ ಆರ್ ಟಿಸಿ ನಿರ್ಧಾರ ಬೆಂಗಳೂರು,ಜೂ,24,2020(..): ರಾಜ್ಯದ ಕೊರೋನಾದಿಂದ ಲಾಕ್ಡೌನ್ ಮಾಡಿದ ಹಿನ್ನೆಲೆ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್ ಗಳ ಸಂಚಾರವನ್ನ ನಾಳೆಯಿಂದ ಆರಂಭಿಸಲು ಕೆಎಸ್ ಆರ್ ಟಿಸಿ ನಿರ್ಧರಿಸಿದೆ. ನಾಳೆಯಿಂದ ಬೆಂಗಳೂರಿನಿಂದ 8 ಕಡೆಗೆ ಎಸಿ ಬಸ್ ಗಳ ಸಂಚಾರ ನಡೆಯಲಿದೆ. ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆಗೆ ಎ.ಸಿ ಬಸ್‌ಗಳು ಸಂಚರಿಸಲಿವೆ. ಈ ನಡುವೆ ಬಸ್ ಗಳಲ್ಲಿನ ತಾಪಮಾನ 24 ರಿಂದ 25 ಸೆಲ್ಸಿಯಸ್ ಇರುವಂತೆ ನಿರ್ವಹಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕೊರೋನಾ ಸೋಂಕು ಹರಡುವುದನ್ನ ತಡೆಯುವ ಸಲುವಾಗಿ ರಾತ್ರಿ ಪ್ರಯಾಣದಲ್ಲಿ ಹೊದಿಕೆ ನೀಡದಿರಲು ನಿರ್ಧರಿಸಲಾಗಿದೆ. : – – –-