ತಮಿಳುನಾಡಿನಿಂದ ಕಳ್ಳದಾರಿ ಮೂಲಕ ಬರುತ್ತಿದ್ದ ಏಳು ಮಂದಿ ಅಕ್ರಮ ನುಸುಳುಕೋರರ ಬಂಧನ: ಕೇಸ್ ದಾಖಲು… ಬೆಂಗಳೂರು,ಜೂ,24,2020(..): ತಮಿಳುನಾಡಿನಿಂದ ಕಳ್ಳದಾರಿ ಮೂಲಕ ಬರುತ್ತಿದ್ದ ಏಳು ಮಂದಿ ಅಕ್ರಮ ನುಸುಳುಕೋರರನ್ನ ಅತ್ತಿಬೆಲೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಿಂದ ರಾಜ್ಯಕ್ಕೆ ಕರೋನ ಹರಡುವ ಭೀತಿ ಎದುರಾಗಿರುವ ಹಿನ್ನೆಲೆ ತಮಿಳುನಾಡಿನಿಂದ ರಾಜ್ಯಕ್ಕೆ ಬರುವವರನ್ನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ನಡುವೆ ಬಂಧಿತ ಏಳು ಜನರು ತಮಿಳುನಾಡಿನಿಂದ ಕಳ್ಳದಾರಿ ಮೂಲಕ ರಾಜ್ಯಕ್ಕೆ ಆಗಮಿಸುತ್ತಿದ್ದರು. ಅತ್ತಿಬೆಲೆ ಸುತ್ತಮುತ್ತ ಕಳ್ಳ ದಾರಿಗಳಲ್ಲಿ ನುಸುಳಿ ಬರುತ್ತಿದ್ದ ತಮಿಳುನಾಡು ಮೂಲದ 7 ಜನರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಇದೀಗ ಏಳು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. : – - - – -