ಮಹಾಮಾರಿ ಕೊರೋನಾಗೆ ಟಿಎಂಸಿ ಶಾಸಕ ಬಲಿ… ಕೋಲ್ಕತ್ತ,ಜೂ,24,2020(..): ಮಹಾಮಾರಿ ಕರೊನಾ ಸೋಂಕಿಗೆ ಪಶ್ಚಿಮ ಬಗಾಳದಲ್ಲಿ ಟಿಎಂಸಿ ಶಾಸಕ ಬಲಿಯಾಗಿದ್ದಾರೆ. ಪಶ್ಚಿಮಬಂಗಾಳದ ಟಿಎಂಸಿ​ ಶಾಸಕ ತಮೋನಾಶ್ ಘೋಷ್ (60) ಕೊರೋನಾ ಸೋಂಕಿನಿಂದ ಬೆಳಗ್ಗೆ ಮೃತಪಟ್ಟಿದ್ದಾರೆ. ತಮೋನಾಶ್ ಘೋಷ್ ಅವರಿಗೆ ಕಳೆದ ತಿಂಗಳು ಕರೊನಾ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮೋನಾಶ್​ ಘೋಷ್​ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಫಾಲ್ಟಾದಿಂದ ಮೂರು ಬಾರಿ ಶಾಸಕರಾಗಿದ್ದ ತಮೋನಾಶ್​ ಘೋಷ್​ ಅವರು 1998ರಿಂದಲೂ ಪಕ್ಷದ ಖಜಾಂಚಿಯಾಗಿದ್ದರು. 35 ವರ್ಷಗಳಿಂದ ನಮ್ಮ ಜತೆ ಇದ್ದ ಅವರೀಗ ಎಲ್ಲರನ್ನೂ ಅಗಲಿದ್ದಾರೆ. ಅವರ ಸ್ಥಾನವನ್ನು ಯಾರಿಂದಲೂ ತುಂಬಲಾಗದು. ಅವರ ಪತ್ನಿ, ಮಕ್ಕಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. : - - –-