ಅಪಾಯದಲ್ಲಿ ಕರ್ನಾಟಕ : ಬೆಂಗಳೂರಿನ 7 ಪೊಲೀಸ್ ಠಾಣೆ ಸೀಲ್ ಡೌನ್ , 72 ಮಂದಿ ಪೊಲೀಸರಿಗೆ ಕೋವಿಡ್ 19 ಪಾಸಿಟಿವ್. ಬೆಂಗಳೂರು, ಜೂ.23, 2020 : (.. ) : ಹೆಚ್ಚಿನ ಜ್ವರ ಮತ್ತು ಕೆಮ್ಮಿನಿಂದಾಗಿ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಮನೆ ಅಡುಗೆಯವನಿಗೆ (ಕುಕ್) ಇದೀಗ ಕೋವಿಡ್ -19 ಪಾಸಿಟಿವ್ ದೃಢವಾಗಿದೆ. ನಿನ್ನೆಯಷ್ಟೆ ಸಚಿವ ಸುಧಾಕರ್ ಅವರ ತಂದೆ ಹಾಗೂ ಇಂದು ಮಡದಿ ಹಾಗೂ ಮಗಳಿಗೆ ಕೋವಿಡ್ -19 ಸೋಂಕು ದೃಢಪಟ್ಟಿತ್ತು.ಇದೀಗ ಸಚಿವರು ಹಾಗೂ ಅವರ ಕುಟುಂಬದ ಎಲ್ಲಾ ಸದಸ್ಯರು ಮತ್ತು ಸ್ವತಃ ಕೋವಿಡ್ -19 ಪರೀಕ್ಷೆಗೆ ಒಳಗಾಗಿದ್ದು, ಖುದ್ದು ಸಚಿವರೇ ಕ್ವಾರಂಟೈನ್‌ನಲ್ಲಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯ ಒಟ್ಟು 24 ಸದಸ್ಯರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಜತೆಗೆ ಅಲಸೂರು ಪೊಲೀಸ್ ಮುಖ್ಯಸ್ಥರಿಗೆ ಪಾಸಿಟಿವ್ ಪತ್ತೆಯಾಗಿದೆ. ಆದ್ದರಿಂದ ಎರಡೂ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅದೇ ರೀತಿ, ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಪಾಸಿಟಿವ್ ಧೃಢಪಟ್ಟ ಕಾರಣ ಸಂಪೂರ್ಣ ಪ್ರದೇಶವನ್ನು ಮುಚ್ಚಲಾಗಿದೆ ( ಸೀಲ್ ಡೌನ್ ). ತಿಲಕ್ ನಗರ ಪೊಲೀಸ್ ಠಾಣೆ, ಕೆಂಗೇರಿ ಪೊಲೀಸ್ ಠಾಣೆ, ಎಡಿಜಿಪಿ ಕಚೇರಿಯ ಆಪ್ತ ಸಹಾಯಕಗೆ ಕರೋನಾ ಸೋಂಕು ಪತ್ತೆಯಾದ ಕಾರಣ ಪೋಲಿಸ್ ಕಚೇರಿಯನ್ನೇ ಸೀಲ್ ಡೌನ್ ಮಾಡಲಾಗಿದೆ.ಈ ತನಕ ಬೆಂಗಳುರು ನಗರದಲ್ಲಿ ಒಟ್ಟು 7 ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. 72 ಮಂದಿ ಪೊಲೀಸ್ ಸಿಬ್ಬಂದಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಜೈನ ದೇವಸ್ಥಾನದಲ್ಲಿ ಕೋವಿಡ್ -19 ಪಾಸಿಟಿವ್ ಬಂದ ಕಾರಣ, ಚಿಕ್ಕಪೇಟೆ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಅದೇ ರೀತಿ ವಿ ವಿ ಪುರಂ, ಸಿದ್ದಾಪುರ, ವಿದ್ಯಾನಾರ್ಯನಪುರ ಸಹ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.ಕರ್ನಾಟಕ ಇದೀಗ ಅಪಾಯದ ಸ್ಥಿತಿಯಲ್ಲಿದೆ. ಬೆಂಗಳೂರು ನಗರದಲ್ಲಿ ಕೋವಿಡ್ -19 ನಿಯಂತ್ರಿಸಲು ಪರಿಸ್ಥಿತಿ ಸರ್ಕಾರದ ಕೈಮೀರಿದೆ ಎನ್ನಲಾಗುತ್ತಿದೆ. : - 7 ’ - 72 . : ’ , -19 , ’ -19, & & -19. ( ) , 24 , & , . , . , , . ( 7 ’ , 72 ) , -19 , , , . . -19 . ?