: ಕರೋನಾ ವೈರಸ್ ಕತೃ ಚೀನಾ, ಸದ್ಯದಲ್ಲೇ ಭಾರತದ ಮೇಲೆ ಮತ್ತೊಂದು ದಾಳಿಗೆ ಸಿದ್ಧತೆ. ಕೇಂದ್ರದ ಎಚ್ಚರಿಕೆ. ಬೆಂಗಳೂರು, ಜೂ.23, 2020 : (.. ) : ಕರೋನಾ ವೈರಾಣು ದಾಳಿಯಿಂದ ಚೇತರಿಸಿಕೊಳ್ಳುವ ಮುನ್ನವೇ ಭಾರತೀಯರಿಗೆ ಮತ್ತೊಂದು ತಲೆ ನೋವು ಶುರುವಾಗುವ ಆತಂಕ ಎದುರಾಗಿದೆ. ಭಾರತದ ಮೇಲೆ ಸೈಬರ್ ಅಟ್ಯಾಕ್ ನಡೆಸಲು ಚೀನಾ ಉದ್ದೇಶಿಸಿದೆ ಎಂಬ ಅಂಶವನ್ನು ಕೇಂದ್ರ ಸರಕಾರ ಬಹಿರಂಗ ಪಡಿಸಿದೆ. ಈ ಸಂಬಂಧ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವಾಲಯದ ಅಡಿಯಲ್ಲಿನ ‘ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ ‘ ನ ಡೈರಕ್ಟರೇಟ್ ಜನರಲ್ ಜನತೆಗೆ ಎಚ್ಚರದಿಂದ ಇರುವಂತೆ ತಿಳಿಸಿದೆ. ಭಾರತೀಯರ ಇ-ಮೇಲ್ ಗಳನ್ನು ಸಾಮೂಹಿಕವಾಗಿ ಹ್ಯಾಕ್ ಮಾಡುವ ಮೂಲಕ ದತ್ತಾಂಶ ಕಳ್ಳತನಕ್ಕೆ ಚೀನಾ ಸೇನೆ ಮುಂದಾಗಿದೆ ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ‘ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ‘ ನ ( - ) ಹೇಳಿಕೆ ಉಲ್ಲೇಖಿಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಕೋವಿಡ್ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು, ಕೋವಿಡ್ ಉಚಿತ ಪರೀಕ್ಷೆ ಎಂಬ ವಿಷಯ ದಲ್ಲಿ ncov2019@. ಎಂಬ ಇ-ಮೇಲ್ ಐಡಿಯಿಂದ ಮೇಲ್ ಬರಬಹುದು. ಆದ್ದರಿಂದ ಈ ಐಡಿಯಿಂದ ಬರುವ ಮೇಲ್ ಗಳನ್ನು ಹಾಗೂ ಅಪರಿಚಿತರ ಇ-ಮೇಲ್ ಐಡಿಗಳಿಂದ ಬರುವ ಸಂದೇಶಗಳನ್ನು ತೆರೆಯದಂತೆ ಎಚ್ಚರಿಕೆ ನೀಡಿದೆ. ಇ-ಮೇಲ್ ಕ್ಲಿಕ್ಕಿಸಿದ್ರೆ ಏನಾಗುತ್ತೆ.. ಸೈಬರ್ ಅಟ್ಯಾಕ್ ಮಾಡುವ ಉದ್ದೇಶದಿಂದಲೇ ಇ-ಮೇಲ್ ಗಳನ್ನು ಕಳುಹಿಸುವವರು ಇಲ್ಲಿನ ನೆಟ್ ಬಳಕೆದಾರರ ದಂತ್ತಾಶವನ್ನು ದುರುಪಯೋಗ ಮಾಡಿಕೊಳ್ಳಬಹುದು. ಅಥವಾ ಫಿಶ್ಶಿಂಗ್ ವೆಬ್ ಸೈಟ್ ಗೆ (ನಕಲಿ ವೆಬ್ ಸೈಟ್ ) ಸಂಪರ್ಕ ಕಲ್ಪಿಸಿ ಮೋಸಗೊಳಿಸಬಹುದು. ಉದಾಹರಣೆಗೆ ಖಾತೆ ಹೊಂದಿರುವ ಬ್ಯಾಂಕ್ ನ ನಕಲಿ ವೆಬ್ ಸೈಟ್ ಸೃಷ್ಠಿಸಿ ಅದರಲ್ಲಿ ನಮ್ಮ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ಅನಾಮಿಕ ವ್ಯಕ್ತಿಗಳ, ಅಪರಿಚಿತರ ಇ-ಮೇಲ್ ಗಳನ್ನು ಕ್ಲಿಕ್ ಮಾಡದೇ ಇರುವುದು ಸೂಕ್ತ ಎಂದು ಅಭಿಪ್ರಾಯ ಪಡುತ್ತಾರೆ ಬೆಂಗಳೂರಿನ ಸೈಬರ್ ಕ್ರೈಮ್ ಟೆಕ್ಕಿ ಚಂದನ್ ವೀರಭದ್ರ. : - - - - - . : . .-32099/4/ / /39741/ 20201265 ) . -(-) . -19 , attackncov2019@.*. -/ . . , .