ಸಚಿವ ಡಾ. ಕೆ. ಸುಧಾಕರ್ ಪತ್ನಿ ಹಾಗೂ ಮಗಳಿಗೂ ಕೊರೋನಾ ಸೋಂಕು ದೃಢ… ಚಿಕ್ಕಬಳ್ಳಾಪುರ,ಜೂ,23,202(..): ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ಕುಟುಂಬಕ್ಕೆ ಮಹಾಮಾರಿ ವಕ್ಕರಿಸಿದೆ. ಸಚಿವ ಡಾ. ಕೆ. ಸುಧಾಕರ್ ಪತ್ನಿ ಹಾಗೂ ಮಗಳಿಗೂ ಕೊರೊನಾ ಸೋಂಕು ದೃಢವಾಗಿದೆ. ನೆನ್ನೆಯಷ್ಟೆ ಡಾ. ಸುಧಾಕರ್ ತಂದೆಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ತಂದೆಯ ಜೊತೆ ಅವರ ಮನೆಯ ಸಹಾಯಕನಿಗೂ ಸೋಂಕಿರುವುದು ದೃಢಪಟ್ಟಿತ್ತು. ಸಚಿವ ಸುಧಾಕರ್ ಅವರೇ ನೆನ್ನೆ ಟ್ವೀಟ್ ಮೂಲಕ ತಂದೆ ಹಾಗೂ ಸಹಾಯಕನಿಗೆ ಕರೊನಾ ಪಾಸಿಟಿವ್ ಬಂದಿರುವುದನ್ನು ಖಚಿತಪಡಿಸಿದ್ದರು. ನಂತರ ಅವರ ಪತ್ನಿ, ಮಗಳಿಗೂ ಸೋಂಕು ತಗುಲಿದ್ದು ನಿಗದಿತ ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನು ಸಚಿವ ಡಾ. ಕೆ. ಸುಧಾಕರ್ ಹಾಗೂ ಅವರ ಇಬ್ಬರು ಗಂಡು ಮಕ್ಕಳ ನೆಗೆಟಿವ್ ವರದಿ ಸಮಾಧಾನ ತಂದಿದೆ. : -. ’- – –