ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ಕೊರೋನಾ ಭೀತಿ: ಎಎಸ್ ಐ ಓರ್ವರ ಅಳಿಯನಿಗೆ ಕೊರೋನಾ ಪಾಸಿಟೀವ್ …. ಮೈಸೂರು,ಜೂ,20,2020(..): ಮೈಸೂರು ದೇವರಾಜ ಪೊಲೀಸ್ ಠಾಣೆಗೂ ಇದೀಗ ಕೊರೋನಾ ಭೀತಿ ಎದುರಾಗಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಎಎಸ್ ಐ ಓರ್ವರ ಅಳಿಯ ಚೆನ್ನೈನಿಂದ ಬಂದಿದ್ದವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಎಎಸ್ ಐ ಚೆನ್ನೈನಿಂದ ಬಂದ ಅಳಿಯನನ್ನು ಕೆ.ಆರ್.ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಇದೀಗ ಚೆನ್ನೈನಿಂದ ಬಂದ ವ್ಯಕ್ತಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಎಎಸ್ ಐ ಕೆ.ಆರ್.ಆಸ್ಪತ್ರೆಗೆ ತೆರಳಿ ಅಳಿಯನನ್ನು ಮಾತಾಡಿಸಿಕೊಂಡು ಬಂದಿದ್ದು, ಬಳಿಕ ಠಾಣೆಗೆ ಬಂದಿದ್ದಾರೆ. ಠಾಣೆಯ ಬಹುತೇಕ ಎಲ್ಲ ಸಿಬ್ಬಂದಿಗಳ ಜೊತೆಯೂ ಮಾತುಕತೆ ನಡೆಸಿದ್ದಾರೆ. ಇದೀಗ ಠಾಣಾ ಸಿಬ್ಬಂದಿಗಳಲ್ಲಿ ಕೊರೋನಾ ಭೀತಿ ಆವರಿಸಿದೆ. ಸೋಂಕಿತ ವ್ಯಕ್ತಿ ವರದಿಯ ವರದಿ ಬರುವ ಮುನ್ನವೇ ಎಎಸ್ ಐ ಅವರು ಠಾಣೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ದೇವರಾಜ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಸನ್ನ ಕುಮಾರ್ ಠಾಣೆಯನ್ನು ನಿನ್ನೆ ರಾತ್ರಿಯೇ ಸ್ಯಾನಿಟೈಸರ್ ಮಾಡಿಸಿದ್ದಾರೆ. ಇದೀಗ ಠಾಣೆಯ ಸಿಬ್ಬಂದಿಗಳಿಗೂ ಕೂಡ ಕೊರೋನಾ ಭಯ ಆವರಿಸಿದೆ. : - – - --- ..