ಸೌರವ್​ ಗಂಗೂಲಿ ಸಂಬಂಧಿಕರಿಗೆ ಕೊರೊನಾ ಸೋಂಕು ಕೋಲ್ಕತ್ತಾ, ಜೂನ್ 20, 2020 (..):ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​ನ ಕಾರ್ಯದರ್ಶಿ ಸ್ನೇಹಶಿಶ್​​ ಗಂಗೂಲಿ ಅವರ ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅಣ್ಣ ಸ್ನೇಹಶಿಶ್​​ ಅವರ ಪತ್ನಿಗೆ ಕೋವಿಡ್​ 19 ಸೋಕು ಹರಡಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಸ್ನೇಹಶೀಷ್ ಪತ್ನಿಗೂ ಮುನ್ನ ಕಳೆದ ವಾರ ಅವರ ಅತ್ತೆ ಮತ್ತ ಮಾವ ಇಬ್ಬರ ವರದಿ ಕೂಡ ಪಾಸಿಟಿವ್​ ಬಂದಿತ್ತು ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ ಸ್ನೇಹಶೀಷ್​ರ ಮೊಮಿನ್ಪುರದ ನಿವಾಸದಲ್ಲಿ ವಾಸಿಸುತ್ತಿದ್ದ ಮನೆಯ ಕೆಲಸದವರಿಗೂ ಕೊವೀಡ್​ ಪಾಸಿಟಿವ್​ ವರದಿ ಬಂದಿದೆ.