ಮುರುಗದಾಸ್-ವಿಜಯ್ ಸಿನಿಮಾದಲ್ಲಿ ರಶ್ಮಿಕಾ ಚಾನ್ಸ್ ! ಬೆಂಗಳೂರು, ಜೂನ್ 20, 2020 (..):ರಶ್ಮಿಕಾ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ ಅದೂ ದಳಪತಿ ವಿಜಯ್ ಜೊತೆ! ಹೌದು. ಎ.ಆರ್. ಮುರುಗದಾಸ್ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನಲಾಗಿದೆ.ಮುರುಗದಾಸ್ ಅವರ ಹೊಸ ಸಿನಿಮಾದಲ್ಲಿ ದಳಪತಿ ವಿಜಯ್ ನಾಯಕ ನಟನಾಗಿ ನಟಿಸಲಿದ್ದು ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ತುಪ್ಪಕ್ಕಿ ಸಿನಿಮಾದ ಸೀಕ್ವೆಲ್ ಎಂದು ಹೇಳಲಾಗುತ್ತಿದೆ. ಮುರುಗದಾಸ್ ಹಾಗೂ ಸನ್ ಪಿಕ್ಚರ್ಸ್ ಸಿನಿಮಾ ಮಾಡುತ್ತಿದ್ದಾರೆ‌.