ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಟೆಂಪೊ ಡಿಕ್ಕಿ: ಇಬ್ಬರು ಸಾವು… ಉಡುಪಿ,ಜೂ,18,2020(..): ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಟೆಂಪೊ ಡಿಕ್ಕಿ ಹೊಡೆದು ಟೆಂಪೊ ಚಾಲಕ ಮತ್ತು ಕ್ಲೀನರ್ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಂಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತ ಸಂಭವಿಸಿದೆ. ದಿನೇಶ್(35) ಮಂಜು(30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಟೆಂಪೊ ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಇಬ್ಬರು ಅಪಘಾತ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಈ ಕುರಿತು ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – - -.