ಚಿರಂಜೀವಿ ಸರ್ಜಾ, ಸುಶಾಂತ್ ಸಿಂಗ್ ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ ಬೆಂಗಳೂರು,ಜೂನ್ 17, 2020 (..):ಚಿರಂಜೀವಿ ಸರ್ಜಾ , ಸುಶಾಂತ್ ಸಿಂಗ್ ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ ಸೂಚಿಸಿದೆ. ಗೂಗಲ್ ಇಂಡಿಯಾ ಟ್ವೀಟ್ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಬದುಕು ಮುಗಿಸಿದ ಕಲಾವಿದರಿಗೆ ನಮನ ಸಲ್ಲಿಸಿದೆ. ಕಷ್ಟಕರವಾದ ಸಮಯ. ನಾವು ದೂರ ಉಳಿದಿದ್ದೇವೆ. ಒಬ್ಬರಿಗೊಬ್ಬರು ಸಂಪರ್ಕದಲ್ಲಿ ಇರುವುದು ಹಿಂದೆಂದಿಗಿಂತಲೂ ಬಹಳ ಮುಖ್ಯವಾಗಿದೆ. ಯಾರಾದರೂ ಈ ರೀತಿ ಕಷ್ಟದಲ್ಲಿ ಇರುವುದು ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ಈ ನಂಬರ್​​ಗೆ ಕರೆ ಮಾಡಿ ಅಂತಾ ನಂಬರ್​​ಯೊಂದನ್ನು ಹಾಕಿ ಗೂಗಲ್​ ಟ್ವೀಟ್​ ಮಾಡಿದೆ. ಈ ಮೂಲಕ ಪ್ರತಿಭಾವಂತ ನಟರ ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ ಸೂಚಿಸಿದೆ.