ಭಾರತ –ಚೀನಾ ಗಡಿಯಲ್ಲಿ ಮತ್ತೆ ಸಂಘರ್ಷ: ಮೂವರು ಯೋಧರು ಹುತಾತ್ಮ… ನವದೆಹಲಿ,ಜೂ,16,2020(..): ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಈ ವೇಳೆ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಭಾರತ -ಚೀನಾ ಗಡಿ ಗಲ್ವಾನ್ ವ್ಯಾಲಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಂಟಾಗಿದ್ದು ಚೀನಿ ಸೈನಿಕರ ದಾಳಿಯಿಂದಾಗಿ ಭಾರತೀಯ ಸೇನೆಯ ಓರ್ವ ಸೈನ್ಯಾಧಿಕಾರಿ ಹಾಗೂ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ನಿನ್ನೆ ತಡರಾತ್ರಿ ಈ ಘರ್ಷಣೆ ನಡೆದಿದ್ದು ಭಾರತೀಯ ಸೇನೆಯ ಓರ್ವ ಸೈನ್ಯಾಧಿಕಾರಿ ಹಾಗೂ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಈ ಕುರಿತು ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ. ಶಾಂತಿ ಮಾತುಕತೆ ಬಳಿಕವೂ ಚೀನಿ ಸೈನಿಕರು ಉದ್ಧಟತನ ಮೆರೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಭಾರತೀಯ ಸೇನೆ ಮಧ್ಯಾಹ್ನ 2 ಗಂಟೆಗೆ ತುರ್ತು ಸುದ್ಧಿಗೋಷ್ಠಿ ನಡೆಸಲಿದೆ. : -- - - -.