ಇಸ್ಪೀಟ್ ಆಡಿ ಹಣ ಕಳೆದುಕೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣು… ಮೈಸೂರು,ಜೂ,15,2020(..): ಸಾಲ ಮಾಡಿ ಇಸ್ಪೀಟ್ ಆಡಿ ಹಣ ಕಳೆದುಕೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೊರವಲಯದ ವರುಣಾ ಕೆರೆಗೆ ಹಾರಿ ನಾರಾಯಣ(೫೦) ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾರಾಯಣಸಾಲ ಮಾಡಿ ಇಸ್ಪೀಟ್ ಆಡಿ ಹಣ ಕಳೆದುಕೊಂಡಿದ್ದರು. ಈ ನಡುವೆ ಸಾಲ ಕೊಟ್ಟವರು ಹಿಂದಿರುಗಿಸುವಂತೆ ಒತ್ತಡ ಹಿನ್ನೆಲೆ ಬೇಸತ್ತ ನಾರಾಯಣ ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : –-