ಬಿರುಕು ಬಿಟ್ಟ ದೊಡ್ಡ ಗಡಿಯಾರದ ಕಟ್ಟಡ ವೀಕ್ಷಣೆ: ತಂತ್ರಜ್ಞಾನ ಬಳಸಿ ರಿಪೇರಿಗೆ ಚಿಂತನೆ… ಮೈಸೂರು,ಜೂ,15,2020(..): ನಗರದಲ್ಲಿರುವ ಪಾರಂಪರಿಕ ಇತಿಹಾಸವುಳ್ಳ ಬೃಹತ್ ದೊಡ್ಡ ಗಡಿಯಾರದ ಕಟ್ಟಡದ ಮೇಲ್ಬಾಗದಲ್ಲಿ ಬಿರುಕು ಬಿಟ್ಟಿದ್ದು ಈ ಹಿನ್ನೆಲೆ ಇಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಕಟ್ಟಡದ ಮೇಲ್ಬಾಗದಲ್ಲಿ ಇರುವ ಗಂಟೆಯ ಬಳಿ ಬಿರುಕು ಕಂಡಿತ್ತು. ಹೀಗಾಗಿ ಪಾರಂಪರಿಕ ತಜ್ಞರು ಹಾಗೂ ಪಾಲಿಕೆ ಅಯುಕ್ತ ಗುರುದತ್ತ್ ಹೆಗ್ಡೆ ಅವರು ದೊಡ್ಡ ಗಡಿಯಾರ ಕಟ್ಟಡದ ಬಳಿ ತೆರಳಿ ವೀಕ್ಷಣೆ ಮಾಡಿದರು. ಈ ಸಂಬಂಧ ಈಗಾಗಲೇ ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಿದ್ದು ಕಟ್ಟಡಕ್ಕೆ ಪುನರ್ ಜೀವನ ನೀಡಲು ಚಿಂತನೆ ನಡೆಸಿದೆ. ತಂತ್ರಜ್ಞಾನ ಬಳಸಿ ಕಟ್ಟಡ ರಿಪೇರಿ ಮಾಡಿಸಲು ಚಿಂತನೆ ನಡೆಸಲಾಗಿದೆ. : - -- - -