ಜೂನ್ 25 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ: ಪ್ರೌಢಶಾಲೆಗಳಲ್ಲಿ ಪ್ರವೇಶ ಪತ್ರ ವಿತರಣೆ… ಮೈಸೂರು,ಜೂ,15,2020(..): ಜೂನ್ 25 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಪ್ರಾರಂಭವಾಗಲಿದ್ದು ಈ ಹಿನ್ನೆಲೆ ಇಂದಿನಿಂದಲೇ ಪ್ರೌಢಶಾಲೆಗಳಲ್ಲಿ ಪ್ರವೇಶ ಪತ್ರ ವಿತರಣೆ ಮಾಡಲಾಗುತ್ತಿದೆ. ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿ ಇಂದಿನಿಂದಲೇ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಮಾಡಲಾಗುತ್ತಿದ್ದು ವಿದ್ಯಾರ್ಥಿಗಳು, ಪೋಷಕರು, ಗೆಳೆಯರೊಟ್ಟಿಗೆ ಹೈಸ್ಕೂಲ್ ಆವರಣದಲ್ಲಿ ಜಮಾವಣೆಗೊಂಡು ಸಿಬ್ಬಂದಿಯಿಂದ ಹಾಲ್ ಟಿಕೆಟ್ ಪಡೆಯುತ್ತಿದ್ದಾರೆ. ಹಾಗೆಯೇ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಪ್ರವೇಶ ಪತ್ರ ಪಡೆದರು. ಸುಧೀರ್ಘ ಅವಧಿ ಬಳಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ನೆರೆದಿದ್ದುದ್ದು ಕಂಡು ಬಂತು. ಈ ವೇಳೆ ಪರೀಕ್ಷಾ ವಿಚಾರ ಕುರಿತು ವಿದ್ಯಾರ್ಥಿಗಳು ಪರಸ್ಪರ ಸಮಾಲೋಚನೆ ನಡೆಸಿದರು. ಬಹುದಿನಗಳ ಬಳಿಕ ಭೇಟಿಯಾದ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿತ್ತು. : – 25th- – - -