ಅಕ್ಷಯ್ ಕುಮಾರ್’ಗೆ ಟಿಕ್ ಟಾಕ್ ವೀಡಿಯೋ ಟ್ಯಾಗ್ ಮಾಡಿದ ಡೇವಿಡ್ ವಾರ್ನರ್ ಮುಂಬೈ, ಜೂನ್ 15, 2020 (..):ಡೇವಿಡ್ ವಾರ್ನರ್ ಇದೀಗ ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಸ್ಟೆಪ್ ಹಾಕಿ ವಿಡಿಯೋ ಹರಿಬಿಟ್ಟಿದ್ದಾರೆ. ತಾವಷ್ಟೇ ಅಲ್ಲದೆ, ಜೊತೆಯಲ್ಲಿ ಮಕ್ಕಳೂ ಕುಣಿದಿರುವ ವಿಡಿಯೋ ಜನರ ಮೆಚ್ಚುಗೆ ಗಳಿಸಿದೆ. ಇದಕ್ಕೆ ಅಕ್ಷಯ್ ಕುಮಾರ್ ಅವರನ್ನೂ ಟ್ಯಾಗ್ ಮಾಡಿ ಬಾಲ ಡ್ಯಾನ್ಸ್ ಎಂದೂ ಕರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಶಿಲ್ಪಾ ಶೆಟ್ಟಿ ಸೇರಿ ಅನೇಕರು ಶೇರ್ ಮಾಡಿದ್ದಾರೆ. ಈ ಹಿಂದೆ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಹಲವು ನಟರ ಸಿನಿಮಾಗಳ ಡೈಲಾಗ್ ಗಳಿಗೆ ವಾರ್ನರ್ ಸ್ಟೆಪ್ ಹಾಕಿದ್ದರು.