ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಹಂಪ ನಾಗಾರಾಜಯ್ಯ ಮೈಸೂರು,ಸೆಪ್ಟಂಬರ್, 20,2024 (..):ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟಕರಾಗಿ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಅವರ ಹೆಸರನ್ನ ಘೋಷಣೆ ಮಾಡಲಾಗಿದೆ. ಮೈಸೂರಿನಲ್ಲಿ ಇಂದು ಈ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಈ ಬಾರಿಯ ದಸರಾ ಉದ್ಘಾಟಕರಾಗಿ ಸಾಹಿತಿ ಹಂಪ ನಾಗಾರಾಜಯ್ಯ ಹೆಸರನ್ನ ಘೋಷಣೆ ಮಾಡಿದರು. ಅಕ್ಟೋಬರ್ 3 ರಿಂದ ಅ.12 ರವರೆಗೆ ಮೈಸೂರು ದಸರಾ ನಡೆಯಲಿದೆ. ಅಕ್ಟೋಬರ್ 3 ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದ್ದು ಉದ್ಘಾಟಕರಾಗಿ ಸಾಹಿತಿ ಹಂಪ ನಾಗಾರಾಜಯ್ಯ ಆಯ್ಕೆಯಾಗಿದ್ದಾರೆ. : , , -2024