ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಹೆಚ್.ಡಿಕೆ ತಿರುಗೇಟು ಮಂಡ್ಯ,ಸೆಪ್ಟಂಬರ್,20,2024 (..):ಡಿನೋಟಿಫಿಕೇಷನ್ ವಿಚಾರವಾಗಿ ಕಾಂಗ್ರೆಸ್ ಸಚಿವರು ತಮ್ಮ ರಾಜೀನಾಮೆಗೆ ಒತ್ತಾಯ ವಿಚಾರಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಮಂಡ್ಯದ ಉರಮಾರ ಕಸಲಗೆರೆ ಗ್ರಾಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ, ನನಗೂ ಇದಕ್ಕೂ ಏನು ಸಂಬಂಧ..? ಕನ್ನಡ ಓದೋಕೆ ಬರುತ್ತೋ, ಇಂಗ್ಲೀಷ್ ಓದೋಕೆ ಬರುತ್ತೋ ಕೇಳಿ ಆ ಪೇಪರ್‌ನ್ನು ಸರಿಯಾಗಿ ಕುಳಿತು ನೋಡಲು ಹೇಳಿ ಅದರಲ್ಲಿ ಏನಿದೆ..? ಅವರೇನೂ ಹುಚ್ಚರಾ ರಾಜೀನಾಮೆ ಕೇಳಲು. ಅವರು ಕೇಳಿದರೂ ಎಂದು ರಾಜೀನಾಮೆ ಕೊಡಬೇಕಾ..? ಎಂದು ಕಿಡಿಕಾರಿದರು. ನಾನು ಏಕೆ ರಾಜೀನಾಮೆ ಕೊಡಬೇಕು..? ಏನು ತಪ್ಪು ಮಾಡಿದ್ದೇನೆ..? ಅವರು ಸರಿಯಾಗಿ ದಾಖಲೆಗಳನ್ನ ನೋಡಿದ್ದಾರಾ..? ಯಾವನೋ ಬರೆದು ಕೊಟ್ಟಿದ್ದಾರೆ ಬಂದು ತುತ್ತೂರಿ ಊದಿದ್ದಾರೆ. ತನಿಖೆ ಮಾಡಲಿ ಮುಡಾ ಹಗರಣಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಹೆಚ್.ಡಿಕೆ ಸ್ಪಷ್ಟಪಡಿಸಿದರು. : , , ,