ಸದ್ಯದಲ್ಲೇ ಹೋಟೆಲ್ ಕೆಫೆ ಮೈಸೂರು ಸೀಲ್ ಡೌನ್… ಮೈಸೂರು,ಜೂ,13,2020(..): ಮೈಸೂರಿನ ಇಟ್ಟಿಗೆಗೂಡಿನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿ ಕೆಫೆ ಮೈಸೂರು ಹೋಟೆಲ್ ಗೆ ಹೋಗಿದ್ದ ಹಿನ್ನೆಲೆ ಸದ್ಯದಲ್ಲೇ ಪಾಲಿಕೆ ಅಧಿಕಾರಿಗಳು ಹೋಟೆಲ್ ಕೆಫೆ ಮೈಸೂರು ಸೀಲ್ ಡೌನ್ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಇಟ್ಟಿಗೆಗೂಡಿನಲ್ಲಿ ತಮಿಳುನಾಡು ಟ್ರಾವೆಲ್ ಹಿಸ್ಟರಿ ಹೊಂದಿದ್ದ ವ್ಯಕ್ತಿಗೆ ಸೋಂಕು ಪತ್ತೆಯಾಗಿತ್ತು. ಆ ವ್ಯಕ್ತಿ ಕೆಫೆ ಮೈಸೂರು ಹೋಟೆಲ್ ಗೆ ಭೇಟಿ ನೀಡಿದ್ದರು.ಹೀಗಾಗಿ ಹೋಟೆಲ್ ನ ಮಾಲೀಕರು ಸೇರಿ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ನಡುವೆ ನಾಲ್ವರಲ್ಲಿ ಇಬ್ಬರಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇಂದು ಪಾಲಿಕೆ ಅಧಿಕಾರಿಗಳು ಕೆಫೆ ಮೈಸೂರು ಮುಂಭಾಗ ರಸ್ತೆಯನ್ನು ಸೀಲ್ ಡೌನ್ ಮಾಡಲಿದ್ದಾರೆ. : - - -