ಓಟಿಟಿ ಪ್ಲಾಟ್ ಫಾರ್ಮ್’ನಲ್ಲಿ ಬಿಡುಗಡೆಯಾಗಲು ‘ಮೈಸೂರು ಡೈರೀಸ್’ ಪ್ಲಾನ್ ಬೆಂಗಳೂರು, ಜೂನ್ 12, 2020 (..):ಕನ್ನಡದ ಎರಡು ಸಿನಿಮಾಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿವೆ. ಪಿ.ಆರ್.ಕೆ ಪ್ರೊಡಕ್ಷನ್ ವತಿಯಿಂದ ಪುನೀತ್ ರಾಜ್ ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಮತ್ತು ಲಾ ಸಿನಿಮಾಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲು ಈಗಾಗಲೇ ದಿನಾಂಕಗಳು ನಿಗದಿಯಾಗಿವೆ. ಯುವಪ್ರತಿಭೆಗಳ ನಟಿಸಿ ತಯಾರಿಸಿರುವ ಸಿನಿಮಾ ಮೈಸೂರ್ ಡೈರೀಸ್ ಸಿನಿಮಾ, ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಧನಂಜಯ್ ರಾವ್ ಎಂಬ ಯುವಪ್ರತಿಭೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ, ಪ್ರಭು ಮುಂಡ್ಕೂರ್ ಹಾಗೂ ಪಾವನಾ ಗೌಡ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.