ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ… ನವದೆಹಲಿ, ಜೂ,10,2020(..): ದೇಶದಲ್ಲಿ ಕೊರೋನಾ ಸಂಕಷ್ಟದ ನಡುವೆ ಇಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತಿಲೀಟರ್ ಗೆ 40 ಪೈಸೆ ಹಾಗೂ ಡೀಸೆಲ್ ದರ ಪ್ರತಿಲೀಟರ್ ಗೆ 45 ಪೈಸೆ ಹೆಚ್ಚಾಗಿದೆ. ಪೆಟ್ರೋಲ್ 73 ರುಪಾಯಿಯಿಂದ 73.40 ರುಪಾಯಿಗೆ ತಲುಪಿದೆ. ಹಾಗೆಯೇ ಡಿಸೇಲ್ 71.17 ರುಪಾಯಿಯಿಂದ 71.62 ರುಪಾಯಿಗೆ ಏರಿಕೆಗೊಂಡಿದೆ. ಜೂನ್ 7 ರಂದು (ಭಾನುವಾರ) ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ ನಾಲ್ಕು ದಿನ ತೈಲ ಬೆಲೆ ಏರಿಕೆ ಕಂಡಿದೆ. : – - -