‘ವೀಕ್ ಸಿಎಂ’: ಬಿಜೆಪಿ ನಾಯಕರ ಟೀಕೆಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ತಿರುಗೇಟು. ಮೈಸೂರು,ಮಾರ್ಚ್,22,2024(..):ಸಿದ್ದರಾಮಯ್ಯ ವೀಕ್ ಸಿಎಂ ಎಂದು ವಿಪಕ್ಷ ನಾಯಕ ಅಶೋಕ್, ಮಾಜಿ ಡಿಸಿಎಂ ಅಶ್ವತ್ ನಾರಾಯಣ್ ಹೇಳಿಕೆಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕರೇ ಇಲ್ಲದೇ ಆರು ತಿಂಗಳು ಸುಮ್ಮನೆ ಕುಳಿತಿದ್ರಿ. ನಿಮ್ಮಂತಹ ವೀಕ್ ವ್ಯಕ್ತಿಗಳಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಎಂ.ಕೆ ಸೋಮಶೇಖರ್ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಕೆ ಸೋಮಶೇಖರ್, ಯಾವ ಮಾನದಂಡದ ಮೇಲೆ ವೀಕ್ ಸಿಎಂ ಎಂದರು ಗೊತ್ತಾಗ್ತಾ ಇಲ್ಲ. ಸಿದ್ದರಾಮಯ್ಯ ಅವರು ವೀಕ್ ಮುಖ್ಯಮಂತ್ರಿ ಅಂತಾ ಹೇಳಲು ನಿಮಗೆ ಯಾವ ನೈತಿಕತೆ ಇದೆ. ತಮ್ಮ ಅನೇಕ ಜನಪರ ಯೋಜನೆಗಳಿಂದಲೇ ಜನರಿಗೆ ಹತ್ತಿರವಾದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಒಬ್ಬರೆ. ಪಂಚ ಗ್ಯಾರಂಟಿ ಯೋಜನೆಗಳ ಸರದಾರ ಸಿದ್ದರಾಮಯ್ಯ ಯೋಜನೆಗಳನ್ನು ಇಡೀ ದೇಶವೇ ತಿರುಗಿ ನೋಡುತ್ತಿದೆ. ಸಿದ್ದರಾಮಯ್ಯ ಅವರ ನೇರ ನುಡಿ ಹಾಗೂ ಯೋಜನೆಗಳು ಜನರಿಗೆ ತಲುಪುತ್ತಿರುವುದು ನಿಮಗೆ ತಡೆಯಲಾಗದೇ ಅವರ ಹೆಸರನ್ನು ಬಳಸಿಕೊಂಡು ನೀವು ಮೈಲೇಜ್ ತೆಗೆದುಕೊಳಳೋಕೆ ಪ್ರಯತ್ನ ಮಾಡಿದ್ದೀರಾ.? ಸಿದ್ದರಾಮಯ್ಯ ಅವರ ಏಳಿಗೆ ಮತ್ತು ಅಭಿವೃದ್ಧಿ ವಿಚಾರಗಳನ್ನು ಸಹಿಸದ ನೀವೇಷ್ಟು ಎಂದು ವೀಕ್ ತಿಳಿಯುತ್ತದೆ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಕಿಡಿಕಾರಿದರು. : - - - -