ಬಳ್ಳಾರಿ , ವಿಜಯಪುರ, ಕಲ್ಬುರ್ಗಿಯನ್ನ ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರಕ್ಕೆ ಮನವಿ- ಸಚಿವ ಭೈರತಿ ಬಸವರಾಜ್… ಹುಬ್ಬಳ್ಳಿ,ಜೂ,9,2020(..): ಬಳ್ಳಾರಿ, ವಿಜಯಪುರ, ಕಲಬುರಗಿಯನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಭೈರತಿ ಬಸವರಾಜ್, ಸ್ಮಾರ್ಟ್ ಸಿಟಿಯಲ್ಲಿ 58 ಯೋಜನೆಗಳಿವೆ. ಈ ನಡುವೆ ಬಳ್ಳಾರಿ, ವಿಜಯಪುರ, ಕಲಬುರಗಿಯನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು. ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅವಳಿ ನಗರದಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಆದಕಾರಣ ಜನತಾ ಬಜಾರ್ ವ್ಯಾಪಾರಿಗಳಿಗೆ ಬೇರೆಡೆ ಜಾಗಕ್ಕೆ ಸೂಚನೆ ನೀಡಬೇಕು ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು. : - - - - - - .