ಮ್ಯಾರೀಡ್ : ಗಂಡನ ಮೊಬೈಲ್ನಲ್ಲಿದ್ದ ‘ ಆ ಫೋಟೋ ‘ ನೋಡಿ ಮೈಸೂರಲ್ಲಿ ನೇಣಿಗೆ ಶರಣಾದ ಮಡದಿ. ಮೈಸೂರು, ಜೂ.05, 2020 : (.. ) ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನೇಣಿಗೆ ಪತ್ನಿ ಶರಣಾದ ಘಟನೆ ನಡೆದಿದೆ. ಭಾವನ (24) ಮೃತ ದುರ್ದೈವಿ. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ಘಟನೆ. ಒಂದು ತಿಂಗಳ ಹಿಂದೆ ಸಾಫ್ಟ್ವೇರ್ ಇಂಜಿನಿಯರ್ ಅಜಯ್ ಎಂಬಾತನನ್ನ ವಿವಾಹವಾಗಿದ್ದ ಭಾವನ. ಮತ್ತೊರ್ವ ಯುವತಿಯ ಜೊತೆ ಅಶ್ಲೀಲವಾಗಿ ಇದ್ದಂತಹ ಫೋಟೋ ನೋಡಿದ ಭಾವನ. ಪತಿ ಅಜಯ್ ಮೊಬೈಲ್ನಲ್ಲಿದ್ದ ಅಶ್ಲೀಲ ಫೋಟೋಗಳು. ಪತಿ ಅಕ್ರಮ ಸಂಬಂಧಕ್ಕೆ ಬೇಸತ್ತು ಮೊಬೈಲ್ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಭಾವನ. ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಜಯ್ ತಂದೆ ರಾಮಪ್ರಸಾದ್ . ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. : -------------