ಆನೆ ದಾಳಿಗೆ ಸಿಲುಕಿ ಯುವಕ ಬಲಿ: ಸೂಕ್ತ ಪರಿಹಾರಕ್ಕೆ ಒತ್ತಾಯ. ಚಾಮರಾಜನಗರ,ಮಾರ್ಚ್,21,2024(..):ಆನೆ ದಾಳಿಗೆ ಸಿಲುಕಿ ಯುವಕ ಬಲಿ ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ನಡೆದಿದೆ. ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವಲಯದಲ್ಲಿ ಈ ಘಟನೆ ಸಂಭವಿಸಿದೆ. ಕತ್ತೆಕಾಲು ಪೋಡು ಗ್ರಾಮದ ಮಾದ (23)ಎಂಬಾತ ಮೃತಪಟ್ಟ ಯುವಕ. ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಾಸ್ ಬರುತ್ತಿರುವಾಗ ಆನೆ ದಾಳಿ ನಡೆಸಿದ್ದು ಈ ವೇಳೆ ಯುವಕ ಮಾದ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರ ಒತ್ತಾಯಿಸಿದ್ದಾರೆ. : –- –-