ಬೆಳಗಾವಿಯ ಗೋಕಾಕ್ ನ ಲೋಕೋಪಯೋಗಿ ಕಚೇರಿ ಸೀಲ್ ಡೌನ್…. ಬೆಳಗಾವಿ,ಜೂ,4,2020(..): ಬೆಳಗಾವಿ ಜಿಲ್ಲೆ ಗೋಕಾಕ್ ನ ಲೋಕೋಪಯೋಗಿ ಕಚೇರಿಗೆ ಕೊರೋನಾ ವೈರಸ್ ಭೀತಿ ಉಂಟಾಗಿದೆ. ಹೌದು ಕಚೇರಿಯ ಸಿಬ್ಬಂದಿಯೊಬ್ಬರು ಕರೋನಾ ಸೋಂಕಿತರ ಸಂಪರ್ಕದಲ್ಲಿದ್ದ ಹಿನ್ನೆಲೆ ಲೋಕೋಪಯೋಗಿ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಲೊಕೋಪಯೋಗಿ ಕಚೇರಿಯ 14 ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಲಾಕ್ ಡೌನ್ ಸಡಿಲಗೊಳಿಸಿದ ಬಳಿಕ ವ್ಯಾಪಾರ ವಹಿವಾಡು ಸಾರಿಗೆ ಎಲ್ಲಾ ಆರಂಭವಾಗಿದ್ದು ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಕರೋನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. : -- - –