ಜುಲೈ 1ರಿಂದ ಶಾಲೆಗಳ ಪ್ರಾರಂಭ ಇದು ಸರ್ಕಾರ ನಿರ್ಧರಿಸಿದ ದಿನಾಂಕ ಅಲ್ಲ-ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ…. ಬಾಗಲಕೋಟೆ,ಜೂ,3,2020(..): ಜುಲೈ 1ರಿಂದ ಶಾಲೆಗಳನ್ನ ಪ್ರಾರಂಭಿಸಲು ಚಿಂತನೆ ಶಿಕ್ಷಣ ಇಲಾಖೆಯ ನಿರ್ಧಾರ. ಅದು ಸರ್ಕಾರ ನಿರ್ಧರಿಸಿದ ದಿನಾಂಕ ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಚಿಂತನೆ ಮಾಡಬೇಕಿದೆ. ಈಗಾಗಲೇ ಈ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಿದೆ. ಜೂನ್,10,11,12 ರಂದು ಪೋಷಕರ ಸಭೆಗೆ ಸೂಚನೆ ನೀಡಲಾಗಿದೆ. ಜೂನ್ 15ರೊಳಗೆ ಪೋಷಕರ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರ ಸರ್ಕಾರಕ್ಕೆ ಕಳಿಸಲಾಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಎರಡು ಹಂತದಲ್ಲಿ ಶಾಲೆಗಳನ್ನ ಪ್ರಾರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿದ್ದು ಈ ವೇಳೆ ಶಾಲೆಗಳ ಆರಂಭ ಬೇಡ ಎಂಬುದು ಹಲವರ ಅಭಿಪ್ರಾಯವಾಗಿದೆ. : – – 1 – -