ಪ್ರಯಾಣಿಕರು ಕ್ವಾರಂಟೈನ್ ಆಗದಿದ್ರೆ ಕ್ರಿಮಿನಲ್ ಕೇಸ್- ಎಚ್ಚರಿಕೆ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್… ಬೆಂಗಳೂರು,ಜೂ,2,2020(..): ಮುಂಬೈನಿಂದ ರೈಲಿನಲ್ಲಿ ರಾಜ್ಯಕ್ಕೆ ಪ್ರಯಾಣಿಕರು ಆಗಮಿಸಿದ್ದು, ಈ ನಡುವೆ ಇಬ್ಬರು ಪ್ರಯಾಣಿಕರು ಪೊಲೀಸರ ಕಣ್ತಪ್ಪಿಸಿ ಆಟೋದಲ್ಲಿ ಪರಾರಿಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುಂಬೈನಿಂದ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಿದ್ದು ಅವರನ್ನ ಟೆಸ್ಟ್ ಮಾಡಿ ಕ್ವಾರಂಟೈನ್ ಗೆ ಕಳಿಸಲಾಗುತ್ತಿದೆ. ಈ ನಡುವೆ ಇಬ್ಬರು ಪ್ರಯಾಣಿಕರು ಆಟೋ ಹತ್ತಿ ಪರಾರಿಯಾಗಿದ್ದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರಯಾಣಿಕರು ತಾವಾಗಿಯೇ ಬಂದು ಕ್ವಾರಂಟೈನ್ ಆಗಬೇಕು. ಇಲ್ಲದಿದ್ದರೇ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. : –—- -