ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ಮದುವೆ ದಿನಾಂಕ ಫಿಕ್ಸ್ ಬೆಂಗಳೂರು, ಜೂನ್ 01, 2020 (..):ಹೈದರಾಬಾದ್: ನಟ ರಾಣಾ ದಗ್ಗುಬಾಟಿ ಮದುವೆ ದಿನಾಂಕ ನಿಗದಿಯಾಗಿದೆ. ಇತ್ತೀಚೆಗೆ ಉದ್ಯಮಿ ಮಿಹೀಕಾ ಬಜಾಜ್ ಅವರ ಜೊತೆ ರಾಣಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಈ ಜೋಡಿಯ ಮದುವೆ ದಿನಾಂಕ ನಿಕ್ಕಿ ಆಗಿದೆ. ರಾಣಾ ಮತ್ತು ಮಿಹೀಕಾ ಮದುವೆ ಇದೇ ವರ್ಷದ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ರಾಣಾ ತಂದೆ ನಿರ್ಮಾಪಕ ಸುರೇಶ್ ಬಾಬು ತಿಳಿಸಿದ್ದರು. ಆದರೆ ಇದೂಗ ಆಗಸ್ಟ್ 8 ರಂದೇ ವಿವಾಹ ಮಾಡಲು ಎರಡು ಕುಟುಂಬದವರು ನಿಶ್ಚಯಿಸಿದ್ದಾರೆ. ಮದುವೆ ಹೈದರಾಬಾದ್‍ನಲ್ಲಿ ಭವ್ಯ ಮಂಟಪದಲ್ಲಿ ನಡೆಯಲಿದೆ ಎಂದು ರಾಣಾ ತಂದೆ ಸ್ಪಷ್ಟಪಡಿಸಿದ್ದಾರೆ.