ಇಂದಿನಿಂದ ರೈಲು ಸಂಚಾರ ಆರಂಭ: ಒಟ್ಟು ರಾಜ್ಯಕ್ಕೆ ಆಗಮಿಸಲಿವೆ ಒಟ್ಟು 16 ರೈಲುಗಳು.. ಬೆಂಗಳೂರು,ಜೂ,1,2020(..): ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ರೈಲು ಸೇವೆ ಇಂದಿನಿಂದ ಆರಂಭವಾಗಿದ್ದು, ರಾಜ್ಯಕ್ಕೆ ಒಂದೇ ದಿನ 16 ರೈಲು ಗಳು ಆಗಮಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂಬೈ ಟು ಬೆಂಗಳೂರು ಎರಡು ರೈಲು, ದೆಹಲಿ ಟು ಬೆಂಗಳೂರು, ಮುಂಬೈ ಟು ಗದಗ, ಹುಬ್ಬಳ್ಳಿಯಿಂದ ಬೆಂಗಳೂರಿಗೆ, ಯಶವಂತಪುರದಿಂದ ಶಿವಮೊಗ್ಗಕ್ಕೆ ಮತ್ತು ಹುಬ್ಬಳ್ಳಿ ಟು ನಿಜಾಮುದ್ದೀನ್, ಬೆಂಗಳೂರು ಟು ದಾನ್ ಪುರಕ್ಕೆ ರೈಲು ಸಂಚಾರ ನಡೆಸಲಿವೆ. ಕೊರೋನಾ ಪೀಡಿತ ಎಂಟು ರಾಜ್ಯಗಳಿಂದ ರಾಜ್ಯಕ್ಕೆ ರೈಲು ಆಗಮಿಸಲಿದ್ದು ಹೀಗಾಗಿ ಕೊರೋನಾ ಸೋಂಕಿತರ ಸಂಖ್ಯೆ ಸ್ಫೋಟವಾಗುವ ಸಾಧ್ಯತೆ ಇದೆ. : - - --