59ನೇ ವಸಂತಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್ ಬೆಂಗಳೂರು, ಮೇ 30, 2020 (..):ಕ್ರೇಜಿಸ್ಟಾರ್ ರವಿಚಂದ್ರನ್ 59ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ರೇಜಿ ಸ್ಟಾರ್ ಜನ್ಮದಿನ ಆಚರಿಸಿಕೊಂಡಿರಲಿಲ್ಲ. ಆದ್ರೆ ಇಂದೇ ಅವರ ಮಗಳು ಗೀತಾಂಜಲಿ ವಿವಾಹ ವಾರ್ಷಿಕೋತ್ಸವ ಆಗಿರುವುದರಿಂದ ಕುಟುಂಬದ ಜೊತೆ ಈ ಆಚರಣೆ ಮಾಡಲಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ನಾನು ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ಮನೆಯ ಮುಂದೆ ಬರುವುದು ಬೇಡ ಎಂದು ಕ್ರೇಜಿ ಸ್ಟಾರ್ ಮನವಿ ಮಾಡಿದ್ದಾರೆ.