ಜೂ.10ರಂದು ಐಸಿಸಿಗೆ ನೂತನ ಅಧ್ಯಕ್ಷರ ನೇಮಕ ಸಾಧ್ಯತೆ ದುಬೈ, ಮೇ 30, 2020 (..):ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ (ಐಸಿಸಿ) ಜೂ. 10ರಂದು ನೂತನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಈಗ ಭಾರತದ ಶಶಾಂಕ್‌ ಮನೋಹರ್‌ ಈ ಸ್ಥಾನದಲ್ಲಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸೇರಿದಂತೆ ಹಲವಾರು ಮಂದಿಯ ಹೆಸರು ಐಸಿಸಿ ಮುಖ್ಯಸ್ಥ ಹುದ್ದೆಗೆ ಕೇಳಿ ಬಂದಿದೆ. ಆದರೆ ಸತತ ಎರಡನೇ ಅವಧಿಗೆ ಭಾರತೀಯರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸುವುದು ಅಸಾಧ್ಯ ಎಂದೂ ಹೇಳಲಾಗುತ್ತಿದೆ.