ಸಂಕಷ್ಟದಲ್ಲಿ ‘ಬುಕ್ ಮೈ ಶೋ’ ಸಂಸ್ಥೆ: 270 ಸಿಬ್ಬಂದಿ ಫೈರ್ ! ಬೆಂಗಳೂರು, ಮೇ 30, 2020 (..):‘ಬುಕ್ ​ಮೈ ಶೋ’ ಕಂಪೆನಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದು, 270 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಸಿನಿಮಾ ಪ್ರದರ್ಶನಗಳಿಗೆ ಆನ್​​ಲೈನ್​ ಮೂಲಕ ಟಿಕೆಟ್​ ಹಂಚುತ್ತಿದ್ದ ಬುಕ್ ಮೈ ಶೋ ಲಾಕ್​ಡೌನ್​ ಸಮಯದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ಕೊರೋನಾ ಲಾಕ್​​ಡೌನ್​​ನಿಂದಾಗಿ ಥಿಯೇಟರ್​ಗಳು ಬಾಗಿಲು ಮುಚ್ಚಿವೆ. ಹೆಚ್ಚಿನ ಸಿನಿಮಾಗಳು ಒಟಿಟಿ ಮೂಲಕ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ಕೆಲ ಸಿನಿಮಾಗಳು ಲಾಕ್​ಡೌನ್​ ಮುಗಿದ ನಂತರ ಥಿಯೇಟರ್​ಗೆ ಬರಲು ಕಾಯುತ್ತಿವೆ. ಇಂತಹ ಸಮಯದಲ್ಲಿ ‘ಬುಕ್​ ಮೈ ಶೋ ಸಂಸ್ಥೆಗೂ ದೊಡ್ಡ ಪೆಟ್ಟುಬಿದ್ದಿದೆ.