ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರು ಸೇರಿದಂತೆ 14 ಮಂದಿ ಕ್ವಾರಂಟೈನ್ಗೆ : ಬೆಳಗಿನ ಸುದ್ದಿ ಪ್ರಸಾರ ರದ್ದು ಪಡಿಸಿದ ‘ ಚಂದನ’ . ಬೆಂಗಳೂರು, ಮೇ 29, 2020 : (.. ) : ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರು ಸೇರಿದಂತೆ 14 ಮಂದಿ ಈಗ ಕ್ವಾರಂಟೈನಲ್ಲಿ ಇರಿಸಲಾಗಿದೆ. ಕ್ಯಾಮರಾಮನ್ ಒಬ್ಬರಿಗೆ ಕರೋನ ಪಾಸಿಟಿವ್ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಜತೆಗೆ ದೂರದರ್ಶನದ ದಿನವಹಿ 5 ಬುಲೆಟಿನ್ ಗಳ ಪೈಕಿ ಬೆಳಗ್ಗೆ ಹಾಗೂ ಮಧ್ಯಾಹ್ನದ ಬುಲೆಟಿನ್ ರದ್ದುಪಡಿಸಿ, ಸಂಜೆಯ ಮೂರು ಬುಲೆಟಿನ್ ಪ್ರಸಾರಕ್ಕೆ ಮಾತ್ರ ನಿರ್ಧರಿಸಲಾಗಿದೆ. ಇದರಿಂದ ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿದ್ದ ಸುದ್ಧಿ ರದ್ದಾಗಿದೆ. ಆದರೆ ಸಂಜೆ 4.30, ರಾತ್ರಿ 7 ಗಂಟೆ ಹಾಗೂ 9 ಗಂಟೆಗೆ ಪ್ರಸಾರವಾಗುತ್ತಿದ್ದ ಬುಲೆಟಿನ್ ಎಂದಿನಂತೆ ಪ್ರಸಾರವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸ್ವಾಬ್ ಟೆಸ್ಟ್ : ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 20 ಮಂದಿಗೆ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಯಿತು. ಕರೋನಾ ಸೊಂಕಿತ ಕ್ಯಾಮೆರಾಮನ್ ಜತೆಗೆ ಸಂಪರ್ಕಕ್ಕೆ ಬಂದಿದ್ದ ಕಾರಣ ಅವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಲಾಗಿದೆ. ಏನಿದು ಘಟನೆ : ಚಂಡಿಗಢದ ದೂರದರ್ಶನ ಕೇಂದ್ರದಲ್ಲಿ ಫ್ಲೋರ್ ಕ್ಯಾಮರಾಮನ್ ಆಗಿರುವ ಸುರೇಶ್ ಎನ್ನುವವರಿಗೆ ಕರೋನಾ ಪಾಸಿಟಿವ್ ಕಂಡು ಬಂದಿತ್ತು. ಕ್ಯಾಮರಾಮನ್ ಸುರೇಶ್, ಮೇ 23 ರ ರಾತ್ರಿ 9 ಗಂಟೆಗೆ ಬೆಂಗಳೂರು ದೂರದರ್ಶನ ‘ಚಂದನ’ ವಾಹಿನಿಯಲ್ಲಿ ಪ್ರಸಾರವಾದ ನ್ಯೂಸ್ ವೇಳೆ ಕರ್ತವ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದಿರುವ ನ್ಯೂಸ್ ಆ್ಯಂಕರ್ ಸೇರಿದಂತೆ ನ್ಯೂಸ್ ರೂಮ್ ನ ಇತರೆ ಸಿಬ್ಬಂದಿಗಳಿಗೂ ಇದೀಗ ಕರೋನ ಸಂಕಟ ಎದುರಾಗಿತ್ತು. ಇದೀಗ ಅವರನ್ನು ಕ್ವಾರಂಟೈನಲ್ಲಿರಿಸಲಾಗಿದೆ. : 14 , -19