ಹುಣಸೂರಿಗೂ ಶುರುವಾಯ್ತು ಕೊರೋನಾ ಆತಂಕ. … ಮೈಸೂರು,ಮೇ,28,2020(..); ಮಹಾಮಾರಿ ಕೊರೋನಾ ಆತಂಕ ಇದೀಗ ಮೈಸೂರು ಜಿಲ್ಲೆ ಹುಣಸೂರಿಗೂ ಶುರುವಾಗಿದೆ. ಹಾಸನ ಜಿಲ್ಲೆ ಹೊಳೆ ನರಸೀಪುರ ಠಾಣೆಯ ಎ.ಎಸ್.ಐ. ಹುಣಸೂರಿನಲ್ಲಿ ಸಂಚಾರ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಎಸ್ ಐ ಹುಣಸೂರಿನ ಕ್ಲಿನಿಕ್‌ನಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಿದ್ದು ಇದೀಗ ಬಸ್ ನಿಲ್ದಾಣದ ಎದುರಿನ ಶ್ರೀಲಕ್ಷ್ಮಿ ಪಾಲಿ ಕ್ಲಿನಿಕ್ ಸೀಲ್‌ಡೌನ್ ಮಾಡಲಾಗಿದೆ. ಕ್ಲಿನಿಕ್ ಇರುವ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು ಲಾಕ್ ಮಾಡಿದ್ದಾರೆ. ಇನ್ನು ಕ್ಲಿನಿಕ್ ಸುತ್ತ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಎಎಸ್ ಐ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಮನೆ ಹೊಂದಿದ್ದಾರೆ. : - - - –