ಹೆಚ್.ಡಿಕೆಗೆ ಬಿಜೆಪಿ ಜೊತೆ ಮೈತ್ರಿ ಸಮಾಧಾನ ತಂದಿಲ್ಲ-ಸಚಿವ ಚಲುವರಾಯಸ್ವಾಮಿ ವ್ಯಂಗ್ಯ. ಮಂಡ್ಯ,ಮಾರ್ಚ್,20,2024(..):ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಜೆಡಿಎಸ್ ಅಸಮಾಧಾನ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ಬಿಜೆಪಿಯಲ್ಲಿ ಸಾಕಷ್ಟು ಗೊಂದಲವಿದೆ. ಜೆಡಿಎಸ್ ಪಕ್ಷದ ಮೇಲೆ ಅವರಿಗೇನೇ ಆತ್ಮವಿಶ್ವಾಸ ಕುಗ್ಗಿದೆ. ಹೆಚ್.ಡಿ ಕುಮಾರಸ್ವಾಮಿ ನೋವು ಅವರ ಭಾವನೆಯಲ್ಲಿ ಗೊತ್ತಾಗ್ತಿದೆ. ಹೆಚ್.ಡಿ ಕುಮಾರಸ್ವಾಮಿಗೆ ಮೈತ್ರಿ ಸಮಾಧಾನ ತಂದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಆದಾಗ ಜೆಡಿಎಸ್ ಗೆ 7 ಸ್ಥಾನ ಕೊಟ್ಟಿದ್ದವು. ಕುಮಾರಸ್ವಾಮಿ ಇದನ್ನ ಹೇಗೆ ಸರಿಪಡಿಸುತ್ತಾರೆ ನೋಡಬೇಕು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ನನ್ನ ಮಗನ ಮದುವೆ ಇತ್ತು. ಆಹ್ವಾನಿಸುವುದಕ್ಕೆ ಹೋಗಿದ್ದೆ ಎಂದರು. : – - - – – -