ಮೈಸೂರಿನ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ತೆರವು ಸಾಧ್ಯವಿಲ್ಲ: ಸಚಿವ ಸೋಮಶೇಖರ್ ಮೈಸೂರು, ಮೇ 22, 2020 (..):ಚೆಕ್‌ಪೋಸ್ಟ್ ನಿರ್ಬಂಧ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಗೆ ಪ್ರತ್ಯೇಕ ನಿಯಮ ರೂಪಿಸಿ. ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆ ಚೆಕ್‌ಪೋಸ್ಟ್ ತೆರವು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಮಂಡ್ಯ ಭಾಗದ ಚೆಕ್‌ಪೋಸ್ಟ್ ಕಠಿಣಗೊಳಿಸಬೇಕು. ಈ ಸಂಬಂಧ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮೂಲಕ ಮನವಿ ಮಾಡಲಾಗಿದೆ. ಮೇ 31ರವೆಗೂ ಚೆಕ್‌ಪೋಸ್ಟ್‌ನಲ್ಲಿ ಕಠಿಣ ತಪಾಸಣೆ ನಡೆಯಲಿ. ಈ ಬಗ್ಗೆ ಜಿಲ್ಲಾಡಳಿತ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಮಂಡ್ಯ ಮಳವಳ್ಳಿ ಬಂದವರನ್ನು ತಪಾಸಣೆ ಮಾಡಿ ಕ್ವಾರಂಟೈನ್ ಮಾಡಿ. ಮೈಸೂರಿಗೆ ಮತ್ತೆ ಕೊರೊನಾ ಹರಡದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.