ಬೆಂಗಳೂರಿನಲ್ಲಿ ಡೆಡ್ಲಿ ಕೊರೊನಾಗೆ ಮತ್ತೊಂದು ಬಲಿ ಬೆಂಗಳೂರು, ಮೇ 19, 2020 (..):ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ವ್ತಕ್ತಿಯೊಬ್ಬರು ಮೃತಪಟ್ಡಿದ್ದಾರೆ. ನಾಗರಬಾವಿ ಸಮೀಪದ ಪಾಪರೆಡ್ಡಿ ಪಾಳ್ಯದ ನಿವಾಸಿಯಾದ 54 ವರ್ಷದ ವ್ಯಕ್ತಿ ಮೃತರು. ಈ ಮೂಲಕ ಕಳೆದ 24 ಗಂಟೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಹರದಯಾಘಾತದಿಂದ ಇತ್ತೀಚೆಗೆ ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ ಪರೀಕ್ಷಿಸಿದಾಗ ಕೊರೊನಾ ಸೋಂಕು ಇರಿವುದು ದೃಢಪಟ್ಡಿತ್ತು.