ತಾಯಿ ಹಾಗೂ ಮಕ್ಕಳು ಸೇರಿ ಮೂವರು ಆತ್ಮಹತ್ಯೆಗೆ ಶರಣು. ಬೆಂಗಳೂರು,ಮಾರ್ಚ್,20,2024(..):ತಾಯಿ ಹಾಗೂ ಮಕ್ಕಳಿಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜೆ.ಪಿ ನಗರದ 3ನೇ ಹಂತದಲ್ಲಿ ಈ ಘಟನೆ ನಡೆದಿದೆ. ತಾಯಿ ಸುಕನ್ಯ ಇಬ್ಬರು ಮಕ್ಕಳಾದ ನಿಖಿತ್, ನಿಶಿತ್ ಆತ್ಮಹತ್ಯೆಗೆ ಶರಣಾದವರು. ಸಾಲಬಾಧೆಯಿಂದ ಬೇಸತ್ತು ಸುಕನ್ಯ ತಮ್ಮ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಜೆ.ಪಿ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. : – – - – .