ಆಯ್ದ ನಗರಗಳಲ್ಲಿ ಬಸ್, ರೈಲು, ವಿಮಾನ ಸಂಚಾರಕ್ಕೆ ಅನುಮತಿ ಸಾಧ್ಯತೆ ದೆಹಲಿ, ಮೇ 15, 2020 (..):ಲಾಕ್‌ಡೌನ್ 4.0ದಲ್ಲಿ ಆಯ್ದ ನಗರಗಳಲ್ಲಿ ವಿಮಾನ, ರೈಲು, ಬಸ್ ಸಂಚಾರಕ್ಕೆ ಅನುಮತಿ ಸಿಗಲಿದೆ ಎನ್ನಲಾಗಿದೆ. ಮೇ 17 ರಂದು ಲಾಕ್‌ಡೌನ್ ಮುಕ್ತಾಯಗೊಳ್ಳಲಿದ್ದು ಇದಾದ ಬಳಿಕವಷ್ಟೇ ಮುಂದಿನ ದಾರಿ ಏನು ಎನ್ನುವುದು ತಿಳಿದುಬರಲಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ 4.0 ಲಾಕ್‌ಡೌನ್ ತುಂಬಾ ವಿಶೇಷವಾಗಿರಲಿದೆ. ರೆಡ್‌ಝೋನ್, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲಾ ಕಡೆ ಬಸ್‌ಗಳ ಸಂಚಾರ ಆರಂಭಗೊಳ್ಳಲಿದೆ ಆದರೆ ಬೆರಳೆಣಿಕೆ ಬಸ್‌ಗಳು ಮಾತ್ರ ಸಂಚರಿಸಲಿದೆ ಎನ್ನಲಾಗಿದೆ.