ಸರಕು ಸಾಗಣೆ ವಿಮಾನವನ್ನು ಚೀನಾಕ್ಕೆ ಚಲಾಯಿಸಿದ್ದ ಏರ್‌ ಇಂಡಿಯಾದ ಪೈಲಟ್‌ಗಳಿಗೆ ಕೊರೊನಾ ಸೋಂಕು ನವದೆಹಲಿ, ಮೇ 10, 2020 (..):ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಐವರು ಪೈಲಟ್‌ಗಳಿಗೆ ಕೋವಿಡ್-19 ಸೋಂಕು ತಗುಲಿದೆ. ಇವರೆಲ್ಲ ಮುಂಬೈಯವರಾಗಿದ್ದಾರೆ. ಪೈಲಟ್‌ಗಳಿಗೆ ಸೋಂಕು ತಗುಲಿರುವುದು ವಿಮಾನ ಹಾರಾಟ ನಡೆಸುವುದಕ್ಕೂ 72 ಗಂಟೆಗಳ ಮೊದಲು ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇವರ್‍ಯಾರಲ್ಲೂ ಸೋಂಕಿನ ಲಕ್ಷಣಗಳು ಇರಲಿಲ್ಲ. ಇವರು ಸರಕುಸಾಗಣೆ ವಿಮಾನವನ್ನು ಚೀನಾಕ್ಕೆ ಚಲಾಯಿಸಿದ್ದರು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.