ಹನುಮಾನ್ ಚಾಲೀಸಾ ಮೆರವಣಿಗೆ ವೇಳೆ ಹೈಡ್ರಾಮಾ: ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಸೇರಿ ಹಿಂದೂ ಕಾರ್ಯಕರ್ತರು ವಶಕ್ಕೆ. ಬೆಂಗಳೂರು,ಮಾರ್ಚ್,19,2024(..):ಬೆಂಗಳೂರಿನ ನಗರತ್ ಪೇಟೆಯಲ್ಲಿ ಯುವಕ ಮುಕೇಶ್ ಎಂಬುವವರ ಮೇಲೆ ಅನ್ಯಕೋಮಿನ ಯುವಕರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರೆ ನೀಡಲಾಗಿದ್ದ ಹನುಮಾನ್ ಚಲೀಸಾ ಮೆರವಣಿಗೆ ವೇಳೆ ಹೈಡ್ರಾಮಾ ನಡೆದಿದೆ. ನಗರತ್ ​ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಯುವಕ ಮುಕೇಶ್ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಹಿನ್ನೆಲೆ ಹನುಮಾನ್ ಚಾಲೀಸಾಗೆ ಯುವ ಮುಕೇಶ್ ಕರೆ ನೀಡಿದ್ದು ಈ ವೇಳೆ ಹನುಮಾನ್ ಚಾಲೀಸಾ ಮೆರವಣಿಗೆಗೆ ಮುಂದಾದ ಮುಕೇಶ್ ಸೇರಿ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಈ ಸಮಯದಲ್ಲಿ ಸ್ಥಳಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದು ಪೊಲೀಸರ ನಡುವೆ ವಾಗ್ವಾದ ನಡೆಸಿದರು. ಪೊಲೀಸ್ ಜೀಪ್ ಮುಂದೆ ನಿಂತು ಪ್ರತಿಭಟನೆಗೆ ಮುಂದಾದರು. ಈ ನಡುವೆ ಕೇಂದ್ರ ಸಚಿವ ಶೋಭಾ ಕರಂಧ್ಲಾಜೆ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ಹಿಂದೂ ಕಾರ್ಯಕರ್ತರ ಪ್ರತಿಭಟನೆಗೆ ಸಾಥ್ ನೀಡಿದರು. ಈ ವೇಳೆ ಪ್ರತಿಭಟನೆಗೆ ಮುಂದಾದ ಶೋಭಾ ಕರಂದ್ಲಾಜೆ ಅವರು ಸೇರಿ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ನಗರತ್ ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ. : - – - –