ಕೊರೋನಾ ವಾರಿಯರ್ಸ್’ಗೆ ಹೂ ಮಳೆ ಸುರಿಸಿ ಭಾರತೀಯ ಸೇನೆ ಗೌರವ ಬೆಂಗಳೂರು, ಮೇ 03, 2020 (..):ಕೊರೋನಾ ವಾರಿಯರ್ಸ್’ಗೆ ಭಾರತೀಯ ಸೇನೆ ಇಂದು ವಿಶೇಷ ಗೌರವ ಸಲ್ಲಿಸಿದೆ. ಹೆಲಿಕಾಪ್ಟರ್ ಮೂಲಕ ಕೊರೋನಾ ವಾರಿಯರ್ಸ್ ಗಳ ಮೇಲೆ ಹೂಮಳೆ ಸುರಿಸುವ ಮೂಲಕ ಸೇನೆ ಗೌರವ ಸಲ್ಲಿಸಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳೂ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತೀಯ ವಾಯುಸೇನೆಯ ವಿಮಾನಗಳು ಸಂಚರಿಸುವ ಮೂಲಕ ಕೊರೋನಾ ವಾರಿಯರ್ಸ್’ಗಳಿಗೆ ಗೌರವ ಸೂಚಿಸಿದೆ. ಈ ನಡುವೆ ವಿಧಾನಸೌಧದ ಮೇಲೂ ವಾಯುಸೇನೆ ಹೂಮಳೆ ಸುರಿಸಲಿದೆ. ಇಂದು ಮಧ್ಯಾಹ್ನ 3.30ರಿಂಗ 4 ಗಂಟೆ ಒಳಗಾಗಿ ಪುಷ್ಪವೃಷ್ಟಿ ಮೂಲಕ ಕೊರೋನಾ ವಾರಿಯರ್ಸ್’ಗೆ ವಿಶೇಷ ಗೌರವ ಸಲ್ಲಿಸಲಿದೆ.